ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ 4ನೇ ತರಗತಿ ವಿದ್ಯಾರ್ಥಿನಿ ಮೃತ್ಯು
ಬೆಂಗಳೂರು: ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ 4ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಂಗಳೂರಿನ ಕರಿಸಂದ್ರದ ಉರ್ದು ಶಾಲೆಯಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿನಿ ರೋಯಾ (9) ಎಂದು ಗುರುತಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ರೋಯಾ ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ಸೇವಿಸಿದ್ದಳು. ಆಕೆ ಮಾತ್ರೆ ತಿನ್ನುತ್ತಿದ್ದಂತೆ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.




