February 3, 2026

ಪುತ್ತೂರು: ಬೈಕ್ ಮತ್ತು ಪಿಕಪ್ ನಡುವೆ ಅಪಘಾತ: ಬೈಕ್ ಸವಾರ ಮೃತ್ಯು

0
hr-160224-sundara1.jpg

ಪುತ್ತೂರು: ತಾಲೂಕಿನ ಕೌಡಿಚ್ಚಾರು ಪಳ್ಳ ಎಂಬಲ್ಲಿ ಬೈಕ್ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಸುಂದರ ಪೂಜಾರಿ (60)ಎಂಬವರು ಮೃತಪಟ್ಟವರು.

ಸುಂದರ ಪೂಜಾರಿ ಅವರು ಬೈಕ್‌ನಲ್ಲಿ ಕೌಡಿಚ್ಚಾರು ಕಡೆ ಹೋಗುತ್ತಿದ್ದ ವೇಳೆ ಪಿಕಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಸುಂದರ ಪೂಜಾರಿ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ಸಂದೀಪ ಎಂಬವರ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸುಂದರ ಪೂಜಾರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಸೀತಾ, ಪುತ್ರರಾದ ರವಿರಾಜ್, ಪ್ರವೀಣ್, ಪುತ್ರಿ ಸೌಮ್ಯ, ಅಳಿಯ ಶಶಿಧರ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!