February 3, 2026
image_editor_output_image1042374119-1708164980660.jpg

ದೆಹಲಿ: ಕಿರಿಯ ವಯಸ್ಸಿನಲ್ಲೇ ಬಣ್ಣದ ಲೋಕದಲ್ಲಿ ಮಿಂಚಿದ ನಟಿಯೊಬ್ಬಳು 19ರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಆಮಿರ್‌ ಖಾನ್‌ ಅಭಿನಯದ ʼದಂಗಲ್‌ʼ ಸಿನಿಮಾದಲ್ಲಿ ಯುವ ಬಬಿತಾ ಪೋಗಾಟ್‌ ಪಾತ್ರವನ್ನು ನಿರ್ವಹಿಸಿದ ಸುಹಾನಿ ಭಟ್ನಾಗರ್ (19) ಶನಿವಾರ(ಫೆ.17 ರಂದು) ದೆಹಲಿಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಕೆಲ ಸಮಯದ ಹಿಂದೆ ಸುಹಾನಿ ಭಟ್ನಾಗರ್ ಅವರ ಕಾಲು ಮುರಿತಕ್ಕೊಳಗಾಗಿತ್ತು. ಈ ಸಮಯದಲ್ಲಿ ಚಿಕಿತ್ಸೆಗಾಗಿ ಅವರು ಪಡೆದುಕೊಂಡ ಔಷಧಿಗಳು ಅವರ ಮೇಲೆ ಅಡ್ಡ ಪರಿಣಾಮ ಬೀರಿತ್ತು. ಈ ಕಾರಣದಿಂದ ಅವರ ದೇಹ ದ್ರವ ತುಂಬಿ ಊದಿಕೊಂಡಿತ್ತು. ಸುಹಾನಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!