February 3, 2026

ಕುಂಬಳೆ: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

0
image_editor_output_image-514337114-1708063207247.jpg

ಕುಂಬಳೆ: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿಯೋರ್ವರು ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಅಂಗಡಿಮೊಗರು ಪೆರ್ಲಡ ನಿವಾಸಿ ಅಬ್ದುಲ್ಲ ಕುಂಞ (60) ಎಂದು ಗುರುತಿಸಲಾಗಿದೆ.

ಸಂಜೆ ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ಅಬ್ದುಲ್ಲರಿಗೆ ಬೈಕ್‌ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿಲ್ಲ.

ಇದೇ ವೇಳೆ ಬೈಕ್‌ನ ಹಿಂಬದಿ ಸೀಟಿನಲ್ಲಿದ್ದ ಹದಿನೈದರ ಹರೆಯದ ಬಾಲಕ ಕೂಡಾ ಗಾಯಗೊಂಡಿದ್ದು, ಈತನನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತ ಅಬ್ದುಲ್ಲ ಅವರು ಬದಿಯಡ್ಕ ಹಾಗೂ ನೀರ್ಚಾಲ್‌ನಲ್ಲಿರುವ ಲೈಟ್ ಹಾಗೂ ಸೌಂಡ್ಸ್‌ನ ಮೈಕ್ ಆಪರೇಟ‌ರ್ ಆಗಿದ್ದರು.ಬೈಕಿನಲ್ಲಿ ಈರ್ವರು ಆಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿದ್ದು ಬೈಕ್‌ ಚಾಲಕನನ್ನು ಕುಂಬಳೆ ಪೊಲೀಸರು ಬಂದಿಸಿದ್ದಾರೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!