ರಾಜ್ಯ ಬಜೆಟ್-2024: ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ಕೆಫೆ ಹೋಟೆಲ್,
ಬೆಂಗಳೂರು: 2024-25ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3.8 ಲಕ್ಷ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ರಾಜ್ಯದಾದ್ಯಂತ ಮಹಿಳೆಯರೇ ನಡೆಸುವ 50 ಕೆಫೆ ಹೋಟೆಲ್, ಪ್ರತಿ ಹೋಟೆಲ್‌ಗೆ ₹7.5 ಕೋಟಿ ಮೀಸಲು, ಇದೇ ಮೊದಲ ಬಾರಿಗೆ ಸಮುದ್ರ ಆ್ಯಂಬುಲೆನ್ಸ್ ಯೋಜನೆ ಜಾರಿ, 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ, ಸಾಲ ಮರುಪಾವತಿ ಮಾಡುವ ಮಹಿಳೆಯರಿಗೆ ಕೊಡುಗೆ, ರಾಜ್ಯ ಸರ್ಕಾರದಿಂದಲೇ ಶೇ 6ರಷ್ಟು ಬಡ್ಡಿ ಸಹಾಯಧನ, ಟಿಸಿಗೆ 1,334 ಹೊಸ ಇವಿ ಬಸ್ ಖರೀದಿ ಮಾಡಲಾಗುವುದು ಎಂದರು.




