ಯುವ ಟೆನಿಸ್ ಆಟಗಾರ್ತಿ ಜೈನಾಬ್ ಅಲಿ ನಖ್ವಿ ಹೃದಯಾಘಾತದಿಂದ ಮೃತ್ಯು
ಇಸ್ಲಾಮಾಬಾದ್: ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಜೈನಾಬ್ ಅಲಿ ನಖ್ವಿ(17) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಐಟಿಎಫ್ ಜೂನಿಯರ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಜೈನಾಬ್ ಬಂದಿದ್ದರು. ಫೆಬ್ರವರಿ 12 ರಂದು, ಅಭ್ಯಾಸ ಮುಗಿಸಿ ಹೋಟೆಲ್ ಕೋಣೆಗೆ ಬಂದಾಗ ಘಟನೆ ನಡೆದಿದೆ.
ಸೋಮವಾರ ನಖ್ವಿ ಅವರು ITF ಜೂನಿಯರ್ ಪಂದ್ಯಾವಳಿಯ ಮೊದಲು ಅಭ್ಯಾಸ ಪಂದ್ಯದಲ್ಲಿ ಆಡಿದ ಬಳಿಕ ಹೋಟೆಲ್ ಕೋಣೆಗೆ ತೆರಳಿದ್ದ ವೇಳೆ ಕುಸಿದು ಬಿದ್ದಿದ್ದಾರೆ, ಈ ವೇಳೆ ಜೊತೆಗಿದ್ದ ಆಕೆಯ ಅಜ್ಜಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಅಲ್ಲಿದ್ದ ಮಂದಿ ಆಕೆಯನ್ನು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಆಕೆ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.




