March 21, 2026

ಚಾಕುವಿನಿಂದ ಇರಿದು ಪತ್ನಿಯ ಕೊಲೆ

0
image_editor_output_image457671578-1707974930958.jpg

ಕೋಲಾರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕೆಜಿಎಫ್‍ನ ಸಂಜಯ್ ಗಾಂಧಿ ನಗರದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಪವಿತ್ರ (36) ಎಂದು ಗುರುತಿಸಲಾಗಿದೆ. ಮೃತಳ ಪತಿ ಲೋಕೇಶ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಮಹಿಳೆ ಇಂದು (ಬುಧವಾರ) ಸಂಜೆ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಬರುತ್ತಿರುವ ವೇಳೆ ಆರೋಪಿ ಪತಿ ಮಹಿಳೆಯ ದೇಹದ ಹಲವೆಡೆ ಚಾಕುವಿನಿಂದ ಇರಿದಿದ್ದಾನೆ.

ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ. ಕೊಲೆಯ ಬಳಿಕ ಆತ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!