March 21, 2026

ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಿಬಿರದಲ್ಲಿ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಸಾವು

0
image_editor_output_image397650111-1707649197170.jpg

ಕೇರಳದ ನಿಲಂಬೂರ್ ಕರುಳ್ಳೆ ವನಂ ರೇಂಜ್‌ನ ನೆಡುಂಕಯಾಟ್ ಸೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಮೀಪದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಆಯೇಷಾ ರಿದಾ (13) ಹಾಗೂ ಫಾತಿಮಾ ಮೊಹಿನಾ (11) ಮೃತಪಟ್ಟವರು. ಮೃತ ವಿದ್ಯಾರ್ಥಿಗಳು ಕಲ್ಪಕಂಚೇರಿ ಕಲ್ಲಿಂಗಪರಮ್ MSMHS ತಿರುರು ಉಪಜಿಲಾ ಶಾಲೆಯ ಒಂಬತ್ತು ಮತ್ತು ಆರನೇ ತರಗತಿಯಲ್ಲಿ ಓದುತ್ತಿದ್ದರು.

ಶಾಲೆಯ ಸೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ 49 ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರ ಗುಂಪು ಆಗಮಿಸಿತ್ತು. ಗುಂಪಿನಲ್ಲಿ 33 ಹುಡುಗಿಯರು ಮತ್ತು 16 ಹುಡುಗರು ಇದ್ದರು.

ಬೆಳಗ್ಗೆ ಶಾಲೆಯಿಂದ ಹೊರಟ ತಂಡ ನಿಲಂಬೂರಿನ ಕೊನೊಲಿ ಪ್ಲಾಟ್ ಮತ್ತು ತೇಗ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಸಂಜೆ 4 ಗಂಟೆ ಸುಮಾರಿಗೆ ಕರುಳ್ಳೆ ಅರಣ್ಯದಲ್ಲಿರುವ ನೆಡುಂಕಯಂ ಪ್ರವಾಸಿ ಕೇಂದ್ರ ತಲುಪಿತು.

ಅರಣ್ಯ ಇಲಾಖೆಯಿಂದ ಅಲ್ಲಿಯೇ ತಂಗಲು ಅನುಮತಿ ಪಡೆದು ಶಿಬಿರದ ತಯಾರಿಯಲ್ಲಿ ಮಕ್ಕಳು ಸ್ನಾನ ಮಾಡುತ್ತಿದ್ದರು. ನೆಡುಂಕಯಂ ಸೇತುವೆಯ ಕೆಳಭಾಗದಲ್ಲಿ ಹುಡುಗರು ಮತ್ತು ಮೇಲಿನ ಭಾಗದಲ್ಲಿ ಹುಡುಗಿಯರು ಸ್ನಾನ ಮಾಡಿದರು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!