5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆ
ಚಿಕ್ಕಬಳ್ಳಾಪುರ: ಮಹಿಳೆಯೋರ್ವರ ಕುತ್ತಿಗೆಯನ್ನು ಬರ್ಬರವಾಗಿ ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಇದೀಗ 5 ದಿನಗಳ ಹಿಂದೆ ನಾಪತ್ತೆಯಾಗಿದ್ದೆ ಮಹಿಳೆಯ ಶವ ಪತ್ತೆಯಾದ ಘಟನೆ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.
ನಗರದ ವಾಪಸಂದ್ರದ ನಿವಾಸಿ ದೀಪಾ (35) ಕೊಲೆಯಾದ ಮಹಿಳೆ. ದೀಪಾ ಅವರು 5 ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ಮಹಿಳೆಯ ತಂದೆ ಸುಬ್ಬಾನಾಯ್ಡು ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಕಾಣೆಯಾಗಿದ್ದ ಮಹಿಳೆಯ ಶವ ಚಾಮರಾಜಪೇಟೆಯಲ್ಲಿ ಸುಧಾಕರ್ ಎನ್ನುವವರ ರೂಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಹಲವು ಅನುಮಾನಗಳನ್ನು ಉಂಟು ಮಾಡಿದೆ.




