March 21, 2026

ಕಾರ್ಕಳ ಪುರಸಭಾ ಕಚೇರಿಯಲ್ಲಿ ಶಾರ್ಟ್‌‌ ಸಕ್ಯೂರ್ಟ್‌

0
image_editor_output_image1753722494-1707575075768.jpg

ಕಾರ್ಕಳ: ಶಾರ್ಟ್‌‌ ಸಕ್ಯೂರ್ಟ್‌ನಿಂದಾಗಿ ಕಾರ್ಕಳ ಪುರಸಭಾ ಕಚೇರಿಯ ವಯರಿಂಗ್ ಸುಟ್ಟು ಹೋಗಿರುವ ಘಟನೆ ಶನಿವಾರ ಮಧ್ಯಾಹ್ನ ಸುಮಾರು 3ಗಂಟೆಗೆ ಸಂಭವಿಸಿದೆ.

ಎರಡನೇ ಶನಿವಾರವಾದ ಕಾರಣದಿಂದಾಗಿ ಸರಕಾರಿ ರಜೆ ಇದ್ದುದರಿಂದ ಕಾರ್ಕಳ ಪುರಸಭಾ ಕಚೇರಿಗೆ ರಜೆ ಘೋಷಿಸಲಾಗಿತ್ತು.‌ ಹೀಗಾಗಿ ಕಚೇರಿಗೆ ಬೀಗ ಜಡಿದೊರುವುದರಿಂದಾಗಿ ಶಾರ್ಟ್‌‌ ಸಕ್ಯೂರ್ಟ್‌ ಆಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಚೇರಿಯ ಒಳಗಡೆಯಿಂದ ಹೊಗೆ ಕಾಣಿಸಿಕೊಂಡಿದ್ದು, ಕೋಟೆ ಮಾರಿಯಮ್ಮನ ದೇವಸ್ಥಾನದ ಮುಂಭಾಗದಲ್ಲಿ ಪುರಸಭೆಯ ಕಚೇರಿಯ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದಲ್ಲಿ ನಿಲುಗಡೆಗೊಳುವ ರಿಕ್ಷಾ ಚಾಲಕರು ಇದನ್ನು ಗಮನಿಸಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!