March 21, 2026

ಬಂಟ್ವಾಳ: ರೈಲ್ವೇ ನಿಲ್ದಾಣದ ಸಮೀಪ ನಿಲ್ಲಿಸಿದ್ದ ಆಟೋರಿಕ್ಷಾ ಕಳವು

0
IMG-20240210-WA0040.jpg

ಬಂಟ್ವಾಳ: ರೈಲ್ವೇ ನಿಲ್ದಾಣದ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವಾದ ಘಟನೆ ಬಂಟ್ವಾಳ ರೈಲ್ವೇ ನಿಲ್ದಾಣದ ಹತ್ತಿರ ನಡೆದಿದೆ.

ಬಿ.ಸಿ. ರೋಡಿನ ಕೈಕುಂಜೆಯಲ್ಲಿ ಅಜಿಲಮೊಗರು ನಿವಾಸಿ ದೇಜಪ್ಪ ಯಾನೆ ಸತೀಶ್ ಅವರ ಆಟೋ ರಿಕ್ಷಾ ಕಳವಾಗಿದೆ. ಅವರು ಬೇರೊಂದು ಕಾರಿನಲ್ಲಿ ಚಾಲಕನಾಗಿ ಉಪ್ಪಳಕ್ಕೆ ತೆರಳುವ ಉದ್ದೇಶದಿಂದ ಆಟೋ ರಿಕ್ಷಾವನ್ನು ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿ ಹೋಗಿದ್ದರು. ನಂತರ ಮುಂಜಾನೆ ಬಂದು ನೋಡುವಾಗ ಆಟೋ ರಿಕ್ಷಾ ಕಳವಾಗಿರುವುದು ಬೆಳಕಿಗೆ ಬಂದಿದೆ.

ರಿಕ್ಷಾವನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಓರ್ವ ಪುರುಷ ಹಾಗೂ ಮಹಿಳೆ ರಿಕ್ಷಾವನ್ನು ಹಿಂದಕ್ಕೆ ದೂಡುತ್ತಿರುವುದು ಬಳಿಕ ಅವರು ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!