February 3, 2026

ಗೂನಡ್ಕದಲ್ಲಿ ಐಪಿಎಲ್ ಪ್ರೆಡಿಕ್ಷನ್ 4 ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ

0
IMG-20211205-WA0007.jpg

ಸಂಪಾಜೆ: ಟೀಮ್ ಅಡ್ಮಿನ್ಸ್ ವಾಟ್ಸಪ್ಪ್ ಗ್ರೂಪ್ ವತಿಯಿಂದ ನಡೆದ ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 ವಿಜೇತರರಿಗೆ ಪ್ರಶಸ್ತಿ ವಿತರಣಾ ಸಮಾರಂಭವು ರಾಯಲ್ ಫ್ರೆಂಡ್ಸ್ ಕ್ಲಬ್ ಗೂನಡ್ಕ ಕಚೇರಿಯಲ್ಲಿ ಇಂದು ನಡೆಯಿತು

ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 2021 ಇದರ ಪ್ರಥಮ ಸ್ಥಾನವನ್ನು ಸಿರಾಜ್ ಕರಾವಳಿ, ದ್ವಿತೀಯ ಸಾಜಿದ್ ಐ ಜಿ, ತೃತೀಯ ಅಜರುದ್ದೀನ್ ಗೂನಡ್ಕ, ಚತುರ್ಥ ಝಹೀರ್ ಪೆರಾಜೆ ಪಡೆದುಕೊಂಡರು ಹಾಗು ಹಲವಾರು ವ್ಯಕ್ತಿಗಳಿಗೆ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಟೀಮ್ ಅಡ್ಮಿನ್ಸ್ ತಂಡದ ಅಯ್ಯುಬ್ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ,ಶವಾದ್ ಗೂನಡ್ಕ, ರಾಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಾಜಿದ್ ಐ ಜಿ, ಯುವ ಉದ್ಯಮಿ ಸಿರಾಜ್ ಕರಾವಳಿ, ರಹೀಮ್ ಬೀಜದಕಟ್ಟೆ, ಅಝೀಝ್ ದರ್ಕಾಸ್, ಜಾಬಿರ್ ಎಂ ಬಿ, ಷರೀಫ್ ಸೆಟ್ಟಿಯಡ್ಕ, ಆರೀಫ್ ಟಿ ಎ, ಫಯಾಜ್ ಪಾಂಡಿ, ನೌಫಾಲ್ ಪುತ್ರಿ, ಸಿರಾಜ್ ಕೊಪ್ಪತಕಜೆ, ಆಶಿಕ್ ಜಿ ಕೆ, ನೌಷು ಬೇತ್ರಿ ಮಿಕ್ದಾದ್, ಉನೈಸ್, ಅಝೀ ಶಾಲಾಬಳಿ, ಅಜ್ಮಲ್ ಸಿನಾನ್ ಪಾಂಡಿ ಮೊದಲಾದವರು ಉಪಸ್ಥಿತರಿದ್ದರು

ಕಾಶಿಮ್ ಪುತ್ರಿ ಸ್ವಾಗತಿಸಿ, ಇಜಾಜ್ ಐ ಮ್ಯಾಕ್ಸ್ ಕಾರ್ಯಕ್ರವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!