February 3, 2026

ಅಮೇರಿಕಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಮೃತ್ಯು:
ದೆಹಲಿಗೆ ವಿಮಾನ ನಿಲ್ದಾಣಕ್ಕೆ ಮರಳಿದ ವಿಮಾನ

0
n338549176163864006500983851f6777c26b5072724482e1d0ebc083668e1d2a71e1c3b081f25eedc7b9c4.jpg

ದೆಹಲಿ: AI-105 ಏರ್ ಇಂಡಿಯಾ ದೆಹಲಿ-ನ್ಯೂ ಯಾರ್ಕ್ ವಿಮಾನ ಹಾರಾಟ ನಡೆಸಿದ ಮೂರು ಗಂಟೆಗಳ ಬಳಿಕ ವಿಮಾನ ಮತ್ತೆ ದೆಹಲಿ ನಿಲ್ದಾಣಕ್ಕೆ ಹಿಂದಿರುಗಿದ ಘಟನೆ ನಡೆದಿದೆ.

ಮಾರ್ಗ ಮಧ್ಯೆ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಮೃತಪಟ್ಟ ವ್ಯಕ್ತಿ ಅಮೆರಿಕ ಪ್ರಯಾಣಿಕರಾಗಿದ್ದು, ಅವರ ಹೆಂಡತಿ ಜೊತೆ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದ್ದಾರೆ.

ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆ ತಕ್ಷಣಕ್ಕೆ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ. ತಕ್ಷಣಕ್ಕೆ ವೈದ್ಯರ ಸಂಪರ್ಕ ನಡೆಸಲಾಗಿದ್ದು, ಅವರು ಮೃತಪಟ್ಟದ್ದಾರೆ ಎಂದು ದೃಢೀಕರಿಸಿದ್ದಾರೆ.

ಇನ್ನು ಈ ತುರ್ತು ಭೂ ಸ್ಪರ್ಶದಿಂದ ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ಹಾರಾಟದ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕರಣ ಕುರಿತು ವಿಮಾನ ನಿಲ್ದಾಣದ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇತರೆ ವ್ಯವಸ್ಥೆ ಮಾಡಿದ ಬಳಿಕ ಉಳಿದ ಪ್ರಯಾಣಿಕರು ಮತ್ತೊಂದು ವಿಮಾನದಲ್ಲಿ ಸುರಕ್ಷಿತ ಪ್ರಯಾಣ ನಡೆಸಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!