September 26, 2026

ಪುತ್ತೂರು: ಮಾರುತಿ ಓಮ್ನಿ, ಆಲ್ಟೋ ಕಾರು ನಡುವೆ ಅಪಘಾತ: ಯಕ್ಷಗಾನ ಕಲಾವಿದರು ಸೇರಿದಂತೆ ನಾಲ್ವರು ಆಸ್ಪತ್ರೆಗೆ ದಾಖಲು

0
image_editor_output_image-617160331-1703140287284.jpg

ಪುತ್ತೂರು: ಮಾರುತಿ ಓಮ್ನಿ ಮತ್ತು ಆಲ್ಟೋ ಕಾರು ನಡುವೆ ಬುಧವಾರ ತಡ ರಾತ್ರಿ ಅಪಘಾತ ಸಂಭವಿಸಿ ಯಕ್ಷಗಾನ ಕಲಾವಿದರು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನೆಹರುನಗರದ ಕಲ್ಲೇಗದಲ್ಲಿ ನಡೆದಿದೆ.

ಯಕ್ಷಗಾನ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಬರುತ್ತಿದ್ದ ಕಲಾವಿದರು ಇದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಮಂಗಳೂರು ತೆರಳುತ್ತಿದ್ದ ಆಲ್ಟೋ ಕಾರು ನಡುವೆ ನೆಹರುನಗರ ಕಲ್ಲೇಗ ಸಮೀಪ ಡಿಕ್ಕಿ ಸಂಭವಿಸಿದೆ.

 

ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಖಾಸಗಿ ಬಸ್‌ಗೂ ಡಿಕ್ಕಿಯಾಗಿದೆ ಎನ್ನಲಾಗಿದೆ. ಮಾರುತಿ ಓಮ್ನಿಯಲ್ಲಿದ್ದ ಮೂವರು ಯಕ್ಷಗಾನ ಕಲಾವಿದರು ಮತ್ತು ಆಲ್ಟೋದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ತೀವ್ರ ಗಾಯಗೊಂಡ ಆಲ್ಟೋದಲ್ಲಿ ಪ್ರಯಾಣಿಕರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!