March 19, 2026

ಉದ್ಯಾವರ: ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಮೃತ್ಯು

0
image_editor_output_image-1087760917-1703139482120.jpg

ಕೋಟೇಶ್ವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಉದ್ಯಾವರ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಭೀಕರ ಅಪಘಾತದಲ್ಲಿ ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ
ಜೋಯಿಸ್ಟನ್ ಕ್ಯಾಸ್ಟಲಿನೋ(22) ಮೃತಪಟ್ಟವರೆಂದು ಗುರುತಿಸಲಾಗಿದೆ‌.

ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಉಡುಪಿ ಕಡೆ ಬರುತ್ತಿರುವಾಗ ಕೋಟೇಶ್ವರ ಬಳಿ
ಕೆಟ್ಟು ನಿಂತಿದ್ದ ಟ್ರಕ್‌ಗೆ ಫಿಗೋ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಲೆಸ್ಟನ್ ಪಿಂಟೋ(22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿಸ್(23), ಗ್ಲಾಡ್‌ಸನ್ ಡಿಸಿಲ್ವ (23)ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!