ಕೆಮ್ಮಾಯಿ: ಬದ್ರಿಯಾ ಜುಮಾ ಮಸೀದಿ ಅಧೀನದ, ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ಮಹಾಸಭೆ:
ಅಧ್ಯಕ್ಷರಾಗಿ ಬಶೀರ್ ಹಾಜಿ ಎ.ಕೆ, ಪ್ರ.ಕಾರ್ಯದರ್ಶಿಯಾಗಿ ಹಕೀಂ ಡಿಕೆ
ಕೆಮ್ಮಾಯಿ: ಬದ್ರಿಯಾ ಜುಮಾ ಮಸೀದಿ ಅಧೀನದ, ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿಯ ವಾರ್ಷಿಕ ಮಹಾ ಸಭೆ ಗೌರವಾಧ್ಯಕ್ಷರಾದ ಸಯ್ಯದ್ ಅಹಮದ್ ಪೂಕೋಯ ತಂಙಳ್ ಪುತ್ತೂರು ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಲತೀಫ್ ಫ್ಯಾನ್ಸಿ 2022-23ರ ಸಾಲಿನ ವರದಿ ವಾಚಿಸಿ ಮಂಡಿಸಿದರು.
ನಂತರ ಈ ಕೆಳಗಿನಂತೆ 2023-24ರ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರು: ಸಯ್ಯದ್ ಪುತ್ತೂರು ತಂಙಳ್,
ಅಧ್ಯಕ್ಷರು: ಬಶೀರ್ ಹಾಜಿ ಎ.ಕೆ
ಉಪಾಧ್ಯಕ್ಷರು: ಹಸನ್ ಹಾಜಿ ಕೆ
ಪ್ರ.ಕಾರ್ಯದರ್ಶಿ: ಹಕೀಂ ಡಿಕೆ
ಜೊತೆಕಾರ್ಯದರ್ಶಿ:ಅಝೀಝ್ ಬದ್ರಿಯಾ
ಕೋಶಾಧಿಕಾರಿ:. ಮೊನಾಕ ಕೆ
ಹಾಗೂ 20 ಮಂದಿಯ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಖತೀಬ್ ಉಸ್ತಾದರಾದ ಇರ್ಷಾದ್ ಸಖಾಫಿ ಬೊಳ್ಳಾಯಿ ಸ್ವಾಗತಿಸಿದರು.


