March 21, 2026

ಅಮೇರಿಕಾದಲ್ಲಿ ರಸ್ತೆ ಅಪಘಾತ:
ಭಾರತ ಮೂಲದ ಯುವಕ ಮೃತ್ಯು

0

ಹೈದರಾಬಾದ್: ಅಮೇರಿಕಾದ ಸಾಯಿ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದ ತೆಲಂಗಾಣ ಮೂಲದ ಯುವಕನೊಬ್ಬ ತಾಯ್ನಾಡಿಗೆ ಹಿಂದಿರುಗುವ ಸಂತೋಷದಿಂದ ಮನೆಯವರಿಗೆ ಉಡುಗೊರೆ ತರಲು ಶಾಪಿಂಗ್ ಹೋಗಿದ್ದಾಗ ಸಾವಿಗೀಡಾಗಿರುವ ಘಟನೆ ಅಮೇರಿಕಾದ ಬಕಿ ರಾಜ್ಯದ ಓಹಿಯೋದಲ್ಲಿ ನಡೆದಿದೆ.

ಮೃತ ಯುವಕನನ್ನು ತೆಲಂಗಾಣದ ಸೂರ್ಯಪೇಟೆಯ ನಿವಾಸಿ ಚಿರು (22) ಎಂದು ಗುರುತಿಸಲಾಗಿದೆ.

ಯುವಕನು ಓಹಿಯೋ ನಗರದಲ್ಲಿ ವಾಸವಿದ್ದು, ಡಿಸೆಂಬರ್ 15ರಂದು ತಾಯ್ನಾಡಿಗೆ ಮರಳಲು ಸಿದ್ಧವಾಗಿದ್ದ. ಈ ಹಿನ್ನೆಲೆಯಲ್ಲಿ ಮನೆಯವರಿಗೆ ಉಡುಗೊರೆ ತರಲೆಂದು ಯುವತಿಯೊಬ್ಬಳ ಜತೆ ಶಾಪಿಂಗ್ ಗೆ ಹೋಗಿದ್ದ ಎಂದು ವರದಿಯಾಗಿದೆ.

ಇನ್ನು ಶಾಪಿಂಗ್ ಗೆ ಹೋಗುತ್ತಿದ್ದಾಗ ಚಿರುವಿನ ಕಾರು ಸ್ಕಿಡ್ ಆಗಿ ಎದುರಿಗೆ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!