November 22, 2024

ಹುಲ್ಲು ತೆಗೆಯುವಾಗ ವಿದ್ಯುತ್ ಸ್ಪರ್ಶ: ತಂದೆ, ಮಗ ಸಾವು

0

ಬೆಳಗಾವಿ: ತಾಲ್ಲೂಕಿನ‌ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಮನೆ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ಸಾವಿಗೀಡಾಗಿದ್ದಾರೆ.

ಕೃಷಿಕರಾದ ಪ್ರಭು ಹುಂಬಿ (68) ಹಾಗೂ ಇವರ ಪುತ್ರ ಮಂಜುನಾಥ (29) ಮೃತಪಟ್ಟವರು.

ಮನೆ ಮುಂದಿನ‌ ವಿದ್ಯುತ್ ಕಂಬಕ್ಕೆ ಬ್ಯಾಲೆನ್ಸಿಗೆ ಹಾಕಲಾಗಿದ್ದ ತಂತಿಗೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿತ್ತು.

ತಂತಿ ಸುತ್ತ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ಪ್ರಭು ಹುಂಬಿ ಅವರಿಗೆ ವಿದ್ಯುತ್ ತಗುಲಿದೆ. ಒದ್ದಾಡುತ್ತಿದ್ದ ಅವರನ್ನು ನೋಡಿ ಓಡಿ ಬಂದು ಪುತ್ರ ಮಂಜುನಾಥ ತಂದೆಯನ್ನು ಕಾಪಾಡಲು ಮುಂದಾದರು. ಆವರಿಗೂ ವಿದ್ಯುತ್ ತಗುಲಿದ್ದರಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!