March 21, 2026

ತಂಗಿಯ ಮೇಲೆ ಅಣ್ಣನಿಂದಲೇ ಅತ್ಯಾಚಾರ:
ಗರ್ಭಿಣಿಯಾದ ಬಳಿಕ ಘಟನೆ ಬೆಳಕಿಗೆ

0
Screenshot_2021-11-29-10-41-29-77_680d03679600f7af0b4c700c6b270fe7.jpg

ಮೈಸೂರು: ನಗರದ ಬಡಾವಣೆಯೊಂದರ 17 ವರ್ಷದ ಬಾಲಕಿ ಮೇಲೆ ಆಕೆಯ ಅಣ್ಣನೇ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

‘ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ ಬಾಲಕಿಯು ಇಬ್ಬರು ಅಣ್ಣಂದಿರ ಜತೆ ವಾಸವಿದ್ದಳು. ಇವರಲ್ಲಿ ಒಬ್ಬಾತ ಮದ್ಯ ಸೇವಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಶನಿವಾರ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಗೊತ್ತಾಯಿತು. ತನಿಖೆ ನಡೆಸಿದಾಗ ಸ್ವಂತ ಅಣ್ಣನೇ ಇದಕ್ಕೆ ಕಾರಣ ಎಂದು ಬಾಲಕಿ ತಿಳಿಸಿದಳು.

ಸದ್ಯ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!