February 3, 2026

ಹಳೆ ಬಂದರು ದಕ್ಕೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರಕ್ಕೆ ಬಿದ್ದು ಮೃತ್ಯು

0
3d9746ug_dead-body-generic_625x300_03_March_21.webp

ಮಂಗಳೂರು: ಇಲ್ಲಿನ ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆಂದು ಬೋಟ್‌ನಲ್ಲಿ ಹೊರಟಿದ್ದ ಮೀನುಗಾರರ ಪೈಕಿ ಮನೋಜ್ ಎಂಬವರು ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇವರ ವಿಳಾಸ ಹಾಗೂ ಇತರೆ ವಿವರಗಳು ಲಭ್ಯವಾಗಿಲ್ಲ.

ಮನೋಜ್ ಇತರ ಐವರು ಮೀನುಗಾರರೊಂದಿಗೆ ನ.23ರಂದು ‘ಸೀಬರ್ಡ್’ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು.ಅಂದು ಸಂಜೆ 4 ಗಂಟೆಗೆ ಚಾಲಕ ಹೊರತುಪಡಿಸಿ ಉಳಿದ ಮೀನುಗಾರರು ಬಲೆ ಬೀಸಿದ ನಂತರ ಮಲಗಿದ್ದರು. ಸಂಜೆ 6.30ರ ಸುಮಾರಿಗೆ ಚಾಲಕ ಕ್ಯಾಬಿನ್‌ ಬಳಿ ಹೋದಗ ಮನೋಜ್‌ ನಾಪತ್ತೆಯಾಗಿರುವುದು ಪತ್ತೆಯಾಗಿದೆ.

ಹುಡುಕಾಡಿದಾಗ , ಅವರ ದೇಹವನ್ನು ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮನೋಜ್ ಯಾವುದೋ ಕಾರಣಕ್ಕೆ ಬೋಟ್ ನ ಬಳಿ ತೆರಳಿದ್ದಾಗ ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬಿದ್ದು ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ
5’4″ ಎತ್ತರ, ಎಣ್ಣೆ ಗಪ್ಪ ಮೈಬಣ್ಣ ಹೊಂದಿದ್ದು , ಹಳದಿ ಮತ್ತು ಕಪ್ಪು ಗಾಢ ಗೆರೆಗಳಿರುವ ಟೀ ಶರ್ಟ್ ಮತ್ತು ಬೂದು ಬಣ್ಣದ ಶಾರ್ಟ್ಸ್ ಧರಿಸಿರುತ್ತಾರೆ. ವಾರಸುದಾರರು ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!