ಉಪ್ಪಳದ ಸರಕಾರಿ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಂದ ರಾಗಿಂಗ್:
ಪ್ರತಿಭಟನೆ, ಕ್ರಮಕ್ಕೆ ಆಗ್ರಹ
ಉಪ್ಪಳ: ಇಲ್ಲಿನ ಸರಕಾರಿ ಹೈಸ್ಕೂಲ್ ಗೆ +1 ತರಗತಿಗೆ ನೂತನವಾಗಿ ಬಂದ ವಿದ್ಯಾಥಿ೯ ಯ ತಲೆಕೂದಲನ್ನು ಸಿನಿಯರ್ ಪ್ಲಸ್ ಟು ವಿದ್ಯಾಥಿ೯ಗಳು ತುಂಡರಿಸಿದ ಘಟನೆ ನಡೆದಿದೆ.
ಈ ಬಗ್ಗೆ ಸಾಮಾಜೀಕ ತಾಣಗಳಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಈ ಕೃತ್ಯ ನಡೆಸಿದ ವಿದ್ಯಾಥಿ೯ಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದೂ ಸಾಮಾಜೀಕ ಕಾಯ೯ಕತ೯ ಕೆಎಫ್ ಇಕ್ಬಾಲ್ ಆಗ್ರಹಿಸಿದ್ದಾರೆ.
ಇಲ್ಲಿನ ಪ್ರಾಚಾಯ೯ರೂ ಕೂಡಲೇ ಈ ಘಟನೆಯಲ್ಲಿ ಭಾಗಿಯಾದ
ವಿದ್ಯಾಥಿ೯ಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದೂ ಒತ್ತಾಯಗಳು ಕೇಳಿ ಬಂದಿದೆ. ಈ ರೀತಿ ವಿದ್ಯಾಥಿ೯ಗಳನ್ನು ರಾಗಿಂಗ್ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮುಂದಾಗಬೇಕಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ.