September 19, 2024

ಮಲ್ಪೆ: ಗೋಲ್ ಎಂಬ ಅಪರೂಪದ ಮೀನು ದಾಖಲೆಯ ಮೊತ್ತಕ್ಕೆ ಮಾರಾಟ

0

ಮಲ್ಪೆ: ಇಲ್ಲಿನ ಮೀನುಗಾರರ ಬಲೆಗೆ ಬಿದ್ದ ಮೀನೊಂದು ದಾಖಲೆಯ ಬೆಲೆಗೆ ಮಾರಾಟವಾಗಿದೆ. ಮಲ್ಪೆಯ ಮೀನುಗಾರಿಕಾ ಬೋಟ್ ನ ಬಲೆಗೆ ಗೋಲ್ ಎಂಬ ಅಪರೂಪದ ಮೀನು ಸಿಕ್ಕಿದ್ದು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.

ಶಾನ್ ರಾಜ್ ತೊಟ್ಟಂ ರವರ ಬಲರಾಂ ಸೆಕೆಂಡ್ ಬೋಟ್ ನ ಮೀನುಗಾರರ ಬಲೆಗೆ ಈ ಮೀನು ಸಿಕ್ಕಿದೆ. ಬಳಿಕ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟವಾಗಿದೆ. ಆ ಮೂಲಕ ಮೀನುಗಾರರಿಗೆ ಅತ್ಯಧಿಕ ಲಾಭವನ್ನು ತಂದುಕೊಟ್ಟಿದೆ.

ಗೋಲ್ ಫಿಶ್ ಎಂಬ ಹೆಸರಿನ ಮೀನು ಇದಾಗಿದ್ದು, ಅಪರೂವೆಂಬಂತೆ ಇದು ಬಲೆಗೆ ಬಿದ್ದಿದೆ. ಈ ಅಪರೂಪದ ಮೀನು 1.80 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಹರಾಜು ನಡೆದಾಗ ಪ್ರತಿ ಕೆಜಿಗೆ 9,060ರಂತೆ ಮಾರಾಟವಾಗಿತ್ತು. ಮೀನು ಒಟ್ಟು 18 ಕೆಜಿ ತೂಕವಿತ್ತು ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

error: Content is protected !!