August 21, 2026

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಪ್ರಜೆಗಳಿಂದ ಮೂರು ಕೆ.ಜಿ ಚಿನ್ನ ವಶ

0
image_editor_output_image180340170-1637721260103.jpg

ಬೆಂಗಳೂರು: ಕೊಲಂಬೊದಿಂದ ಎಂಟು ಮಹಿಳೆಯರು ಸೇರಿದಂತೆ ಹತ್ತು ಸದಸ್ಯರ ತಂಡ ತಮ್ಮ ದೇಹದಲ್ಲಿ ಸುಮಾರು 3 ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಕಳ್ಳ ಸಾಗಣೆ ಮಾಡಲು ನಡೆಸಿದ ಯತ್ನವನ್ನು ಏರ್‌ಪೋರ್ಟ್ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್ ಕಂಡುಹಿಡಿದು, ವಶಪಡಿಸಿಕೊಂಡಿದೆ.

ಪ್ರಯಾಣಿಕರ ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟ ಚಿನ್ನದ ಒಟ್ಟು ಮೌಲ್ಯ ಸುಮಾರು 1.52 ಕೋಟಿ ರೂ. ಆಗಿದೆ.

ನವೆಂಬರ್ 20 ಶನಿವಾರ ರಾತ್ರಿ ಸುಮಾರು 10-30ಕ್ಕೆ ಶ್ರೀಲಂಕಾ ಏರ್ ಲೈನ್ಸ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ತಂಡದ ಅನುಮಾನಾಸ್ಪದ ವರ್ತನೆ ಮೇರೆಗೆ ಪರಿಶೀಲಿಸಿ ಅವರಿಂದ ಒಟ್ಟು 3066.55 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

You may have missed

error: Content is protected !!