May 11, 2026

ಮಗುವನ್ನು ನೆಲಕ್ಕೆ ಬಡಿದು ಗಾಯಗೊಳಿಸಿದ ಪತಿಯ ವಿರುದ್ಧ ದೂರು ನೀಡಿದ ನಟಿ

0
Screenshot_2023-05-09-13-29-31-34_680d03679600f7af0b4c700c6b270fe7.jpg

ದಿಲ್ಲಿ: ತಮ್ಮ ಮಗುವನ್ನೇ ನೆಲಕ್ಕೆ ಬಡಿದು ಗಾಯಗೊಳಿಸಿರುವ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ಖ್ಯಾತ ಕಿರುತೆರೆ ನಟಿ ಚಂದ್ರಿ ಸಹಾ.

ತಾವು ಅಡುಗೆ ಮಾಡುತ್ತಿದ್ದಾಗ ಹಾಲ್ ನಲ್ಲಿ ಮಗುವಿನೊಂದಿಗೆ ಇದ್ದ ತಮ್ಮ ಪತಿ ಅಮನ್ ಮಿಶ್ರಾ 15 ತಿಂಗಳ ಮಗುವನ್ನು ನೆಲಕ್ಕೆ ಮೂರು ಬಾರಿ ಬಡಿದು ಗಾಯಗೊಳಿಸಿದ್ದಾನೆ ಎಂದು ಚಂದ್ರಿಕಾ ಮುಂಬೈನ ಬಂಗೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದಾಲತ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಚಂದ್ರಿಕಾ, ಗಾಯಗೊಂಡ ಮಗುವನ್ನು ಮಲಾಡ್ ಪಶ್ಚಿಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವಿನ ಮೈಮೇಲೆ ಗಾಯಗಳನ್ನು ಗುರುತಿಸಿದ ನಟಿ, ಆನಂತರ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ತಮ್ಮ ಪತಿಯೇ ಮಗುವನ್ನು ಬಡಿದಿರುವುದು ಬೆಳಕಿಗೆ ಬಂದಿದೆ.

ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ಚಂದ್ರಿಕಾ ಗರ್ಭಿಣಿ ಎಂಬುದು ಗೊತ್ತಾಗಿದೆ. ಆಗಲೇ ಮಗುವನ್ನು ತೆಗೆಸುವಂತೆ ಪತಿ ದುಂಬಾಲು ಬಿದ್ದಿದ್ದರಂತೆ. ಪತಿಯ ಮಾತಿಗೆ ಒಪ್ಪದೇ ಮಗುವಿಗೆ ಜನ್ಮ ನೀಡಿದ್ದೆ ಈ ಪ್ರಕರಣಕ್ಕೆ ಕಾರಣ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!