February 2, 2026

ಮನೆಯಲ್ಲಿ ಮಲಗಿದ್ದ ವೇಳೆ ಕಚ್ಚಿದ ನಾಗರಹಾವು: 7 ವರ್ಷದ ಬಾಲಕ ಮೃತ್ಯು

0
image_editor_output_image1820198383-1682066503025.jpg

ದೊಡ್ಡಬಳ್ಳಾಪುರ: ಮನೆಯಲ್ಲಿ ಮಲಗಿದ್ದ ವೇಳೆ ನಾಗರಹಾವು ಕಚ್ಚಿದ ಪರಿಣಾಮ, 7 ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೈರಾಪುರ ತಾಂಡದಲ್ಲಿ ಸಂಭವಿಸಿದೆ.

ಬೈರಾಪುರ ತಾಂಡದ ಮಂಜುನಾಥ್‌ ನಾಯಕ್‌, ಸುಮಿತ್ರಾ ದಂಪತಿಯ ಎರಡನೇ ಪುತ್ರ ಮೌನಿಕ್‌ ಎಂ.ನಾಯಕ್‌ ಮೃತ ಬಾಲಕ.

ಮನೆಯ ಸಮೀಪ ಅವರದ್ದೇ ಹೊಸ ಮನೆಯಲ್ಲಿ ಬಾಲಕ ತಾಯಿ ಹಾಗೂ ಕುಟುಂಬದವರೊಡನೆ ಮೌನಿಕ್‌ ಮಲಗಿದ್ದಾಗ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿರುವುದು ತಕ್ಷಣಕ್ಕೆ ಅರಿವಿಗೆ ಬರಲಿಲ್ಲ.

ಕಚ್ಚಿದ್ದ ಹಾವು ಮನೆಯಲ್ಲಿಯೇ ಇದ್ದು, ಇತರರಿಗೆ ಹಾನಿಯಾಗುವುದು ತಪ್ಪಿದೆ. ಆ ನಂತರ ರಾತ್ರಿ 2 ಗಂಟೆ ಸುಮಾರಿಗೆ ಬಾಲಕನ ನರಳಾಟ ನೋಡಿದ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!