February 2, 2026

ಕೊರಿಯನ್ ಯುವ ಪಾಪ್ ಗಾಯಕನ ಮೃತದೇಹ ಅಪಾರ್ಟ್ ಮೆಂಟ್ ನಲ್ಲಿ ಪತ್ತೆ

0
image_editor_output_image-1906303700-1682032608917.jpg

ಕ್ಷಿಣ ಕೊರಿಯಾ: ಕಳೆದ ಮೂರ್ನಾಲ್ಕು ವರ್ಷಗಳಿಂದ ನಟರು ಹಾಗೂ ಗಾಯಕರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ.

ಈ ಹಿಂದೆ ಖ್ಯಾತ ಪಾಪ್ ಗಾಯಕರಾದ ಜೊಂಗ್ಹ್ಯನ್, ಗೂ ಹಾರಾ, ಸುಲ್ಲಿ ಹೀಗೆ ಅನೇಕ ಗಾಯಕರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಯುವ ಪಾಪ್ ಗಾಯಕ ಮೂನ್ ಬಿನ್ ಮೃತದೇಹ ಅವರ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ 25ರ ಹರೆಯದ ಗಾಯಕ ಕೊರಿಯಾದ ಪ್ರಸಿದ್ಧ ಬಾಯ್ ಬ್ಯಾಂಡ್ ಆಸ್ಟ್ರೋದ ಸದ್ಯಸನಾಗಿದ್ದರು. ನಿನ್ನೆ ರಾತ್ರಿ ಶವವಾಗಿ ಪತ್ತೆಯಾಗುವ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಅವರ ಹಠಾತ್ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *

error: Content is protected !!