August 12, 2026

ನಾಡಾ ಡೋಪಿಂಗ್: ಭಾರತದ ಪ್ರಮುಖ ಮಹಿಳಾ ಟೇಕ್ವಾಂಡೋ ಆಟಗಾರ್ತಿಗೆ 2 ವರ್ಷ ನಿಷೇಧ

0
Screenshot_2023-04-20-05-01-15-54_680d03679600f7af0b4c700c6b270fe7.jpg

ನವದೆಹಲಿ: 2018 ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ಪ್ರಮುಖ ಮಹಿಳಾ ಟೇಕ್ವಾಂಡೋ ಆಟಗಾರ್ತಿ ಕಾಶಿಶ್ ಮಲಿಕ್ ಅವರನ್ನು “ನಾಡಾ” ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಎರಡು ವರ್ಷಗಳ ಕಾಲ ನಿಷೇಧಿಸಿದೆ.

ಏಷ್ಯನ್ ಕ್ರೀಡಾಕೂಟದ ತಯಾರಿಗಾಗಿ ಲಕ್ನೋದದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಶಿಬಿರದಲ್ಲಿ ಕಾಶಿಶ್ ಭಾಗವಹಿಸಿದ್ದು, ಅಲ್ಲಿ ಅವರ ಮಾದರಿಯನ್ನು ನಾಡಾ ತೆಗೆದುಕೊಂಡಿತ್ತು. ಈ ಮಾದರಿಯಲ್ಲಿ ಫ್ಯೂರೋಸೆಮೈಡ್ ಎಂಬ ಉದ್ದೀಪನ ಅಂಶ ಕಂಡುಬಂದಿದೆ. ಇದರ ನಂತರ ಅವರನ್ನು ೨ ವರ್ಷಗಳ ಕಾಲ ನಿಷೇಧಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!