August 15, 2026

ಮಂಗಳೂರು: ಕೋರಿಯರ್ ಕಂಪೆನಿಯ ಹೆಸರಿನಲ್ಲಿ ವಂಚನೆ: ಮೊಬೈಲ್ ಗೆ ಬಂದ ಲಿಂಕ್ ಒತ್ತಿ 72,444 ರೂ. ಕಳೆದುಕೊಂಡ ವ್ಯಕ್ತಿ

0
Screenshot_2023-04-19-10-59-23-05_680d03679600f7af0b4c700c6b270fe7.jpg

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಕೋರಿಯರ್ ಕಂಪೆನಿಯವನೆಂದು ನಂಬಿಸಿದ ಲಿಂಕ್ ಕಳುಹಿಸಿ 72,444 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರು ಪಾರ್ಸೆಲ್‌ಗಾಗಿ ಗೂಗಲ್‌ನಲ್ಲಿ ಕೋರಿಯರ್ ಕಂಪೆನಿಯೊಂದರ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾಗ ಅವರಿಗೆ 9827698553 ಮೊಬೈಲ್ ಸಂಖ್ಯೆ ದೊರೆತಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ಆತ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಲಿಂಕ್‌ವೊಂದನ್ನು ಕಳುಹಿಸಿದ್ದ. ಬಳಿಕ ಗೂಗಲ್ ಪೇನಲ್ಲಿ 5 ರೂ. ಕಳುಹಿಸುವಂತೆ ತಿಳಿಸಿದ. ದೂರುದಾರ ವ್ಯಕ್ತಿ ಹಣ ಪಾವತಿಸಿದರೂ, ಅವರಲ್ಲಿದ್ದ ಪಾರ್ಸೆಲ್ ಕೊಂಡು ಹೋಗಲು ಯಾರೂ ಬಂದಿರಲಿಲ್ಲ.

ಎ.15ರಂದು ದೂರುದಾರರ ಬ್ಯಾಂಕ್ ಖಾತೆಗೆ ಪರ್ಸನಲ್ ಲೋನ್ ಮಂಜೂರಾದ ಸಂದೇಶ ಬಂದಿತ್ತು. ಅವರು ಖಾತೆಯನ್ನು ಪರಿಶೀಲಿಸಿದಾಗ 72,444 ರೂ. ಕಡಿತಗೊಂಡಿರುವುದು ಗಮನಕ್ಕೆ ಬಂದಿತ್ತು. ಕೊರಿಯರ್ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!