ನೂರಕ್ಕೆ ನೂರರಷ್ಟು RSSನವರು ನನಗೆ ಮತ ಹಾಕುತ್ತಾರೆ: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ
ಚಿಕ್ಕೋಡಿ: ನನಗೆ ಆರ್ಎಸ್ಎಸ್ ನವರು ಮತ ನೀಡುತ್ತಾರೆ, RSS ನಲ್ಲಿ ನನ್ನ ಹಿತೈಷಿಗಳಿದ್ದಾರೆ. ಆಂತರಿಕವಾಗಿ ನನ್ನ ಜೊತೆಗೆ ಇದ್ದಾರೆ. ಗುಪ್ತ ಮತದಾನ ಇರುವುದರಿಂದ ಅವರು ಸಹ ಗುಪ್ತವಾಗಿ ನನಗೆ ಮತ ಹಾಕುತ್ತಾರೆ. ನೂರಕ್ಕೆ ನೂರರಷ್ಟು RSS ನವರು ನನಗೆ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತವಾದ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ಅಥಣಿ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್ಎಸ್ಎಸ್ನಲ್ಲೂ ನನಗೆ ಸ್ನೇಹಿತರು ಇದ್ದಾರೆ. ಇದರಿಂದ ನನಗೆ ನೂರಕ್ಕೂ ನೂರರಷ್ಟು ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದಾಗ ಇಲ್ಲಿನ 11 ಜನ ಟಿಕೆಟ್ ಆಕಾಂಕ್ಷಿಗಳು ಹಾಗೂ ಸಾವಿರಾರು ಜನ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಬರಮಾಡಿಕೊಂಡು ಧೈರ್ಯ ತುಂಬಿದ್ದಾರೆ. ನನಗೆ ವಿಶ್ವಾಸವಿದೆ. ಈ ಸಲ ನನ್ನ ಗೆಲುವು ಪಕ್ಕಾ ಎಂದು ತಿಳಿಸಿದರು.




