August 13, 2026

LPG ಸಿಲಿಂಡರ್ ಸ್ಫೋಟ: 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಸದಸ್ಯರು ಸಾವು

0
image_editor_output_image1202075932-1673509900169.jpg

ಚಂಡೀಗಢ: ಪಾಣಿಪತ್‌ನ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತರನ್ನು ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45), ಅವರ ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಮತ್ತು ಅಫ್ಸಾನಾ (8) ಮತ್ತು ಮಗ ಅಬ್ದುಶ್ ಶಕುರ್ (12) ಎಂದು ಗುರುತಿಸಲಾಗಿದೆ.

ಕರೀಂ ಅವರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಾಗಿದ್ದರು. ಅವರ ಕುಟುಂಬದೊಂದಿಗೆ ಒಂದು ಕೊಠಡಿಯ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಪ್ರಕರಣ ಕುರಿತು ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ಬೆಳಗ್ಗೆ 6:30 ರ ಸಮಯದಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!