February 4, 2026

ಮಂಗಳೂರು: ಭಾರೀ ಅಗ್ನಿ ಅವಘಡ: ಬೆಂಕಿಗಾಹುತಿಯಾದ ಏಸ್ ಫುಡ್ ಪ್ರೈವೆಟ್ ಸಂಸ್ಥೆ

0
IMG-20230105-WA0027.jpg

ಮಂಗಳೂರು: ಯೆಯ್ಯಾಡಿ ಕೈಗಾರಿಕಾ ಪ್ರದೇಶದ ಖಾಸಗಿ ಆಹಾರ ಸಂಸ್ಥೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸಂಸ್ಥೆಯು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಗುರುವಾರ ಸಂಜೆ ನಡೆದಿದೆ.

ಕೈಗಾರಿಕಾ ವಲಯದಲ್ಲಿರುವ ಏಸ್ ಫುಡ್ ಪ್ರೈವೆಟ್ ಸಂಸ್ಥೆಯಲ್ಲಿ ಸಂಜೆ 4:45ಕ್ಕೆ ಅಗ್ನಿ ಅವಘಡ ಸಂಭವಿಸಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ಉಂಟಾಗಿದೆ. ಬೆಂಕಿಯ ಕೆನ್ನಾಲಿಗೆ ದಟ್ಟವಾಗಿ ಹರಡಿದ್ದು, ಸ್ಥಳದಲ್ಲಿ ಹಲವಾರು ಜನ ಸೇರಿದ್ದರು.
ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಕದ್ರಿಯಿಂದ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅವಘಡದಿಂದ ಫ್ಯಾಕ್ಟರಿಗೆ ದೊಡ್ಡ ಮೊತ್ತದ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!