March 26, 2026

ಕೋತಿಗಳ ಕಾದಾಟ: 2 ತಿಂಗಳ ಮಗು ಬಲಿ

0
IMG-20230105-WA0028.jpg

ಉತ್ತರ ಪ್ರದೇಶ:ಉತ್ತರಪ್ರದೇಶದ ಬಂಡಾ ಜಿಲ್ಲೆಯ ಚಾಪರ್ ಗ್ರಾಮದ ಕೆಲವು ಭಾಗಗಳಲ್ಲಿ ಕೋತಿಗಳು ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದ್ದು, ಇದೀಗ ಈ ಕಪಿಗಳ ಕಾದಾಟದಿಂದ ಹಸುಳೆಯ ಜೀವ ಹೋಗಿದೆ.

ಮನೆಯ ಅಂಗಳದಲ್ಲಿ ಮಲಗಿದ್ದ 2 ತಿಂಗಳ ಮಗುವನ್ನು ಕಪಿಗಳ ಗುಂಪೊಂದು ಎತ್ತಿಕೊಂಡು ಹೋಗಿದ್ದು, ಈ ವೇಳೆ ಎರಡು ಕಪಿಗಳ ಗುಂಪಿನ ನಡುವೆ ಕಾದಾಟವಾಗಿದೆ. ಮಗುವನ್ನು ಎತ್ತಿಕೊಂಡು ಹೋದಾಗಲೇ ಮನೆಯವರು ರಕ್ಷಣೆ ಮಾಡಲು ಮುಂದಾದಾಗ ಮಗುವನ್ನು ಕೆಳಗೆ ಬಿಸಾಕಿವೆ ಎನ್ನಲಾಗಿದೆ.

ಇನ್ನು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ‌. ಬಿದ್ದ ಕೂಡಲೇ ಮಗುವಿನ ತಲೆಗೆ ಏಟಾಗಿ, ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!