November 9, 2026

ಮಂಗಳೂರು: ಗೆಳೆಯನೊಂದಿಗೆ ಈಜಲು ಹೋದ ಯುವಕ ಸಮುದ್ರ ಪಾಲು

0
IMG-20221231-WA0028.jpg

ಮಂಗಳೂರು: ಸುರತ್ಕಲ್ ಸಮೀಪದ ಲೈಟ್ ಹೌಸ್ ಬೀಚ್ ನಲ್ಲಿ ಗೆಳೆಯನ ಜೊತೆ ಈಜಲು ಹೋದ ಯುವಕ ಸಮುದ್ರ ಪಾಲಾಗಿರುವ ಘಟನೆ ನಡೇದಿದೆ.

ನಾಪತ್ತೆಯಾದ ಯುವಕನನ್ನು ಕಾನ ನಿವಾಸಿ ಸತ್ಯಂ (18) ಎಂದು ಗುರುತಿಸಲಾಗಿದೆ.

ಶನಿವಾರ ಗೆಳೆಯ ಪ್ರಭಾಕರನ್ ಜೊತೆ ಸತ್ಯಂ ಸುರತ್ಕಲ್ ಲೈಟ್ ಹೌಸ್ ಬಳಿಯ ಸಮುದ್ರ ತೀರಕ್ಕೆ ತೆರಳಿದ್ದು ಇಬ್ಬರು ನೀರಿಗಿಳಿದಿದ್ದು, ಈ ವೇಳೆ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ ಆದರೆ ಪ್ರಭಾಕರನ್ ಈಜಿ ದಡ ಸೇರಿದರೆ ಸತ್ಯಂ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ನಾಪತ್ತೆಯಾಗಿದ್ದಾನೆ.

ಇನ್ನು ಗೆಳೆಯ ಪ್ರಭಾಕರನ್ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳೀಯ ಮೀನುಗಾರರು ನಾಪತ್ತೆಯಾದ ಯುವಕನ ಹುಡುಕಾಟಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!