July 9, 2026

ಪ್ರಧಾನಿ ಮೋದಿ ಸಹೋದರ, ಕುಟುಂಬ ಸಂಚರಿಸುತ್ತಿದ್ದ ಕಾರು ಅಪಘಾತ: ಕಾರಿನಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

0
IMG-20221227-WA0009.jpg

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಮತ್ತು ಕುಟುಂಬ ಸಂಚರಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ಮೈಸೂರಿನಲ್ಲಿ ಮಂಗಳವಾರ ನಡೆದಿದೆ. ಕಾರಿನಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ಮೋದಿ, ಅವರ ಮಗ, ಸೊಸೆ, ಮೊಮ್ಮಗ ಕಾರಿನಲ್ಲಿ ಮೈಸೂರಿನಿಂದ ಬಂಡೀಪುರ ಕಡೆಗೆ ಸಂಚರಿಸುತ್ತಿದ್ದರು. ಕಡಕೊಳ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವರಿದ್ದ ಬೆನ್ಜ್ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಪ್ರಹ್ಲಾದ ಮೋದಿ ಅವರ ಗಲ್ಲದ ಭಾಗಕ್ಕೆ ಪೆಟ್ಟಾಗಿದೆ. ಸೊಸೆಗೆ ತಲೆ ಭಾಗಕ್ಕೆ ಪೆಟ್ಟಾಗಿದ್ದು, ಮೊಮ್ಮಗನ ಕಾಲಿಗೆ ತಾಗಿದೆ. ಇನ್ನು ಪ್ರಹ್ಲಾದ್ ಮೋದಿ ಅವರ ಪುತ್ರ ಹಾಗೂ ಚಾಲಕ ಸತ್ಯನಾರಾಯಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಮೈಸೂರು ನಗರದ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಹಜರು ವೇಳೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!