February 3, 2026

ಕಾಸರಗೋಡು: ಮಾದಕ ಪಾನೀಯ ನೀಡಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂರು ಆರೋಪಿಗಳ ಬಂಧನ
 

0
IMG-20221221-WA0024.jpg

ಕಾಸರಗೋಡು:19 ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಮಧೂರು ಪಟ್ಲ ದ ಜೆ . ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ (43) ಮತ್ತು ಉಳಿಯತ್ತಡ್ಕ ದ ಎನ್.ಪ್ರಶಾಂತ್ (27) ಬಂಧಿತರು.

ಕಾಸರಗೋಡು ಮಹಿಳಾ ಠಾಣಾಇನ್ಸ್ ಪೆಕ್ಟರ್ ಪಿ . ಚಂದ್ರಿಕಾ ನೇತೃತ್ವ ದ ತಂಡವು ಇವರನ್ನು ಬಂಧಿಸಿದೆ. ಮಧ್ಯವರ್ತಿಯಾಗಿದ್ದ ಕಾ ಞ೦ಗಾಡಿನ ಮಹಿಳೆಯೋರ್ವಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವತಿಗೆ ಆಮಿಷ ತೋರಿಸಿ ತಂಡವು ಈ ಕೃತ್ಯ ನಡೆಸಿದ್ದು, ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ನೀಡಿ ಅತ್ಯಾಚಾರ ನಡೆಸಲಾಗಿದೆ. ನೆರೆಮನೆಯ ಯುವಕನೋರ್ವ ಈತನನ್ನು ಪ್ರೀತಿಸುವ ನಾಟಕವಾಡಿ ಬಳಿಕ ವಿವಾಹವಾಗುವ ಭರವಸೆ ನೀಡಿ ವಿವಿಧೆಡೆಗೆ ಕರೆದೊಯ್ದಿದ್ದು , ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಲ್ಲದೆ ಮಧ್ಯವರ್ತಿಯಾದ ಮಹಿಳೆ ಮೂಲಕ ಇತರರಿಗೂ ಯುವತಿಯನ್ನು ಒಪ್ಪಿಸಿದ್ದು ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ಕಾಸರಗೋಡು , ಮಂಗಳೂರು , ಚೆರ್ಕಳ , ತೃಶ್ಯೂರು ಮೊದಲಾದೆಡೆಗಳಲ್ಲಿನ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿ ಅತ್ಯಾಚಾರ ನಡೆಸಲಾಗಿದೆ. ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಹಿನ್ನಲೆಯಲ್ಲಿ ಮಾನಸಿಕ – ಅರೋಗ್ಯ ಸಮಸ್ಯೆ ತಲೆದೋರಿದ್ದು, ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಡೆಸಿದ ಕೌನ್ಸಿಲಿಂಗ್ ನಡೆಸಿದ್ದು , ಈ ಸಂದರ್ಭದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.

ಬಳಿಕ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ . ಮಧ್ಯವರ್ತಿಯಾಗಿದ್ದ ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!