February 3, 2026

ಪತ್ನಿಯ ದೇಹವನ್ನು 55 ಭಾಗಗಳಾಗಿ ಕತ್ತರಿಸಿ ಕೊಲೆ: ಆರೋಪಿಯ ಬಂಧನ

0
image_editor_output_image-1752985362-1671421357777.jpg

ರಾಂಚಿ: ದೇಶದಲ್ಲೆಡೆ ಆಕ್ರೋಶಕ್ಕೆ ಕಾರಣವಾದ ದೆಹಲಿಯ ಶ್ರದ್ಧಾ ವಾಕರ್‌ ಕೊಲೆ ಪ್ರಕರಣದ ಮಾದರಿಯಲ್ಲೇ ಮತ್ತೆರಡು ಪ್ರಕರಣಗಳು ಬಹಿರಂಗಗೊಂಡಿವೆ.

ಜಾರ್ಖಂಡ್‌ನ‌ ಸಾಹಿಬ್‌ಗಂಜ್‌ನಲ್ಲಿ ವ್ಯಕ್ತಿಯೊಬ್ಬ ತನ್ನ 2ನೇ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು 55 ಭಾಗಗಳಾಗಿ ಕತ್ತರಿಸಿ, ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದಾನೆ. ನಾಯಿಗಳು ಮಾಂಸದ ತುಂಡುಗಳನ್ನು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತನಿಖೆಯ ನಂತರ, ದೇಹದ ಭಾಗಗಳು ರಬಿತಾ ಪಹಾಡಿನ್‌(22) ಅವರದ್ದು ಎಂಬುದು ತಿಳಿದುಬಂದಿದೆ.

ಪೊಲೀಸರು ಆಕೆಯ ಪತಿ ದಿಲ್ದಾರ್‌ ಅನ್ಸಾರಿ(28)ಯನ್ನು ಬಂಧಿಸಿದ್ದಾರೆ. ರಬಿತಾಳನ್ನು ಅನ್ಸಾರಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಹಲವೆಡೆ ಎಸೆದಿದ್ದು, ದೇಹದ 18 ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!