September 20, 2024

‘ಸಿಎಫ್‌ಐ ಸೇರಿರಿ ಗೋಡೆಬರಹ’ ಒಂದೆರಡು ತಿಂಗಳ ಹಳೆಯದು: ಶಿವಮೊಗ್ಗ ಪೊಲೀಸರು ಮಾಹಿತಿ

0

ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ಪತ್ತೆಯಾದ ‘ಸಿಎಫ್‌ಐ ಸೇರಿರಿ ಗೋಡೆಬರಹ’ ಒಂದೆರಡು ತಿಂಗಳ ಹಳೆಯದು ಎಂದು ಶಿವಮೊಗ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಸೆಪ್ಟೆಂಬರ್ 4 ರಂದೇ ಈ ಗೋಡೆಬರಹಗಳ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಐದು ವರ್ಷಗಳ ಹಿಂದೆಯೇ ಸಿಎಫ್ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ )ಮೇಲೆ ನಿಷೇಧವನ್ನು ಹೇರಿತ್ತು.

ನ.28ರಂದು ಶಿರಾಳಕೊಪ್ಪದಲ್ಲಿ ಹಲವೆಡೆ ಗೋಡೆಗಳ ಮೇಲೆ ಸಿಎಫ್ಐ ಸೇರಿ ಎಂಬ ಬರಹಗಳು ಪತ್ತೆಯಾಗಿದ್ದವು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆ ವೇಳೆ ಗಣೇಶ ಮೂರ್ತಿ ಮೆರವಣಿಗೆಯ ಹಳೆಯ ವಿಡಿಯೋಗಳನ್ನು ಪರಿಶೀಲಿಸಿದಾಗ ಸೆಪ್ಟೆಂಬರ್‌ಗೂ ಮುನ್ನವೇ ಈ ಗೋಡೆಬರಹಗಳ ಬರೆದಿರುವುದು ಕಂಡು ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!