August 13, 2026

ಸುರತ್ಕಲ್: ಮನೆಯ ಮುಂದೆ‌ ನಿಂತಿದ್ದ ಮಗುವನ್ನು ಅಪಹರಣಕ್ಕೆ ಯತ್ನ‌, ವೀಡಿಯೋ ವೈರಲ್

0
image_editor_output_image1832879580-1670301333621.jpg

ಸುರತ್ಕಲ್: ಮನೆಯ ಮುಂದೆ‌ ನಿಂತಿದ್ದ ಮಗುವನ್ನು ಅಪಹರಿಸಲು ವಿಫಲ ಯತ್ನ‌ನಡೆಸಿರುವ ಘಟನೆ‌ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ನಡೆದಿದೆ. ಸುರತ್ಕಲ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೊಕ್ಕಬೆಟ್ಟು ಜುಮಾ‌ ಮಸೀದಿಯ ಮುಂಭಾಗದ ಮನೆಯ ಮುಂದೆ ಮಗುವೊಂದು ನಿಂತಿತ್ತು.‌ ಅಲ್ಲಿಗೆ ಬಂದ ನೀಲಿ ಬಣ್ಣದ ಟಿ ಶರ್ಟ್‌ ಹಾಕಿದ್ದ ವ್ಯಕ್ತಿಯೋರ್ವ ಮಗುವಿನ ಕೈ ಹಿಡಿದು ಅಪಹರಣಕ್ಕೆ ಯತ್ನಿಸಿದ್ದಾನೆ.

ಮಗುವನ್ನು ಅಪಹರಿಸಲು ಯತ್ನಿಸಿದ ದುಷ್ಕರ್ಮಿಯ ಚಲನವಲನಗಳು ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

You may have missed

error: Content is protected !!