August 14, 2026

ಬ್ಯಾಗ್ ನಲ್ಲಿ 22 ಲಕ್ಷ ರೂ. ನಗದು, 1 ಕೆಜಿ ಚಿನ್ನಭರಣ ಪತ್ತೆ

0
image_editor_output_image-1793042005-1669802391736.jpg

ಬೆಂಗಳೂರು: ಭಾನುವಾರ ರಾತ್ರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಇರುವ ಬ್ಯಾಗನ್ನು ಬೀಟ್‌ನಲ್ಲಿದ್ದ ಹೊಯ್ಸಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ನಗರದ ಎಸ್‌ಪಿ ರಸ್ತೆಯಲ್ಲಿ ಹೊಯ್ಸಳ ಸಿಬ್ಬಂದಿ ಬೀಟ್‌ನಲ್ಲಿದ್ದ ವೇಳೆ ವ್ಯಕ್ತಿಯೊಬ್ಬ ಬ್ಯಾಗ್‌ ಹಿಡಿದು ಅನುಮಾನಸ್ಪಾದವಾಗಿ ಓಡಾಡುತ್ತಿದ್ದ. ಆತನ ನಡುವಳಿಕೆಯನ್ನು ಗಮನಿಸಿದ ಹೊಯ್ಸಳ ಪೊಲೀಸರು ಹಿಂಬಾಲಿಸಿ ಆತನನ್ನು ತಡೆದಿದ್ದಾರೆ.

ಈ ವೇಳೆ ಆತ ವಿನೋದ್‌ ಎಂದು ಹೇಳಿದ್ದಾನೆ. ಬ್ಯಾಗ್ ಪರಿಶೀಲನೆ ನಡೆಸಿದ ವೇಳೆ 22 ಲಕ್ಷ ರೂ. ನಗದು, 1 ಕೆಜಿ ಚಿನ್ನಭರಣ ಪತ್ತೆಯಾಗಿದೆ. ವಿಚಾರಣೆ ವೇಳೆ ಚೆನ್ನೈನಿಂದ ಚಿನ್ನಭರಣ ಮತ್ತು ನಗದು ತಂದಿರುವ ಬಗ್ಗೆ ಮಾಹಿತಿ ನೀಡಿದ ವಿನೋದ್‌ ಯಾರು ಇದನ್ನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!