March 23, 2026

ಮಂಗಳೂರು: ಪ್ರಯಾಣಿಕರಿಗೆ ವಿಧಿಸುವ ಬಳಕೆದಾರರ ಶುಲ್ಕ ಹೆಚ್ಚಳ ಇಲ್ಲ, ಮುಂದಿನ ಆದೇಶದವರೆಗೂ ಈಗಿನ ದರವನ್ನೇ ಮುಂದುವರಿಸಲು ಸೂಚನೆ

0
image_editor_output_image1189759042-1668675996846.jpg

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಧಿಸುವ ಬಳಕೆದಾರರ ಶುಲ್ಕ ಏರಿಕೆ ಪ್ರಸ್ತಾವಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತಡೆಯೊಡ್ಡಿದೆ. ಮುಂದಿನ ಆದೇಶದವರೆಗೂ ಈಗಿನ ದರವನ್ನೇ ಮುಂದುವರಿಸಲು ಸೂಚಿಸಿದೆ.

ಬಳಕೆದಾರರ ಶುಲ್ಕ ಏರಿಸುವ ಪ್ರಸ್ತಾವ ಬಹು ವರ್ಷಗಳಿಂದಲೇ ಇದ್ದು, ಅದಕ್ಕೆ ಪ್ರಾಧಿಕಾರ ಅನುಮೋದನೆ ನೀಡಿಲ್ಲ. ಅಲ್ಲದೆ ಮುಂದಿನ ಮಾರ್ಚ್‌ವರೆಗೆ ಅಥವಾ ಮುಂದಿನ ಆದೇಶದವರೆಗೆ ದರವನ್ನು ಯಥಾಪ್ರಕಾರ ಮುಂದುವರಿಸಲು ಸೂಚಿಸಿದೆ. ಹೀಗಾಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಮಂಗಳೂರು, ಅಹ್ಮದಾಬಾದ್‌, ಲಕ್ನೋ, ಜೈಪುರ, ಗುವಾಹಟಿ, ತಿರುವನಂತಪುರ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ಪರಿಷ್ಕರಣೆಗೆ ಪ್ರಸ್ತಾವ ಪ್ರಾಧಿಕಾರದ ಮುಂದಿತ್ತು. ಈ ಪೈಕಿ ಮಂಗಳೂರು, ಅಹ್ಮದಾಬಾದ್‌, ಲಕ್ನೋ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ಏರಿಕೆ ಪ್ರಸ್ತಾವದ ಪರಿಶೀಲನೆ ಅಂತಿಮಗೊಂಡಿಲ್ಲದ ಕಾರಣ ಯಥಾಪ್ರಕಾರ ದರ ಮುಂದುವರಿಸಲು ಪ್ರಾಧಿಕಾರ ನಿರ್ದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!