May 14, 2026

ವೈದ್ಯರ ನಿರ್ಲಕ್ಷ್ಯ: ಫುಟ್‌ಬಾಲ್ ಆಟಗಾರ್ತಿ ಸಾವು

0
image_editor_output_image-411805400-1668513288870.jpg

ಚೆನ್ನೈ: 17 ವರ್ಷದ ಮಹತ್ವಾಕಾಂಕ್ಷಿ ಫುಟ್‌ಬಾಲ್ ಆಟಗಾರ್ತಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಮೊದಲಿಗೆ ತನ್ನ ಕಾಲನ್ನು ಕಳೆದುಕೊಂಡು ಬಳಿಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ದೈಹಿಕ ಶಿಕ್ಷಣದಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಪ್ರಿಯಾ ತನ್ನ ಬಲಗಾಲಿನ ಅಸ್ಥಿರಜ್ಜು ಹರಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊಣಕಾಲು ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆದರೆ ಶಸ್ತ್ರಚಿಕಿತ್ಸೆಯ ನಂತರ ತೊಡಕುಗಳ ಕಾರಣದಿಂದ ಬಾಲಕಿಯ ಕಾಲನ್ನೇ ಕತ್ತರಿಸಬೇಕಾಯಿತು.

ನವೆಂಬರ್ 8ರಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಆದರೆ ಆಕೆಯ ಸಾವಿಗೆ ಕಾರಣ ಅಂಗಾಂಗ ವೈಫಲ್ಯ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!