September 20, 2024

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗು: ರಕ್ಷಿಸಲು ಹೋದ ತಂದೆ, ಇಬ್ಬರೂ ದಾರುಣ ಸಾವು

0

ವಾರಣಾಸಿ: ಮಿರ್ಜಾಮುರಾದ್ ಪೊಲೀಸ್ ವೃತ್ತದ ಬಹೇಡಾ ಹಾಲ್ಟ್ ಬಳಿ ಚಲಿಸುತ್ತಿದ್ದ ರೈಲಿನಿಂದ ಬಾಲಕಿ ಬಿದ್ದಿದ್ದು, ಮಗುವನ್ನು ರಕ್ಷಿಸಲು ಆಕೆಯ ತಂದೆ ಜಿಗಿದ ಪರಿಣಾಮ ಇಬ್ಬರೂ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೀರಾ ರೈನ್ ಎಂಬವರು ತನ್ನ ಪತ್ನಿ ಜರೀನಾ, ಮಗಳು ಮತ್ತು ಸೋದರ ಮಾವ ಫಿರೋಜ್ ಅವರೊಂದಿಗೆ ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದು, ರೈಲಿನಲ್ಲಿ ಜನರು ತುಂಬಿದ್ದರಿಂದ ಸೀಟು ಸಿಗದ ಕಾರಣ ಮನೆಯವರು ಬಾಗಿಲ ಬಳಿಯೇ ಕುಳಿತಿದ್ದರು. ಈ ವೇಳೆ ಮಗು ರೈಲಿನಿಂದ ಬಿದ್ದಾಗ, ಹೀರಾ ರೈನ್ ತಕ್ಷಣ ಅವಳನ್ನು ರಕ್ಷಿಸಲು ಹೊರಗೆ ಹಾರಿದ್ದಾರೆ. ಆಗ ಅವರ ಪತ್ನಿ ತಕ್ಷಣವೇ ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದಾರೆ.

ಇನ್ನು ರೈಲು ನಿಲ್ಲಿಸಿದ ತಕ್ಷಣವೇ ಇತರ ಪ್ರಯಾಣಿಕರು ಅವರ ಸಹಾಯಕ್ಕೆ ಬಂದಿದ್ದು, ಚಲಿಸುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ತಂದೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!