February 2, 2026

ಪಾರ್ಟಿ ವೇಳೆ ಬಿದ್ದು ಗ್ಲೆನ್ ಮ್ಯಾಕ್ಸ್‌ವೆಲ್ ಕಾಲು ಮುರಿತ

0
image_editor_output_image-541580313-1668405752706.jpg

ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಕೂಟ ರವಿವಾರವಷ್ಟೇ ಅಂತ್ಯವಾಗಿದೆ. ಇನ್ನು ತಂಡಗಳು ತಮ್ಮ ದ್ವಿಪಕ್ಷೀಯ ಸರಣಿಯತ್ತ ಗಮನ ಹರಿಸುತ್ತಿವೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಬಿದ್ದು ಕಾಲು ಮುರಿದುಕೊಂಡಿದ್ದು, ಭಾನುವಾರ ಶಸ್ತ್ರಚಿಕಿತ್ಸೆಗೆ ಒಳಗಾದರು.

ಆಸ್ಟ್ರೇಲಿಯಾದ ಮುಂಬರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಸೇರಿದಂತೆ ವಿಸ್ತೃತ ಅವಧಿಗೆ ಮ್ಯಾಕ್ಸ್ ವೆಲ್ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಆಯ್ಕೆಗಾರರು ಹೇಳಿದ್ದಾರೆ.

ಶನಿವಾರ ಸಂಜೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಜಾರಿಬಿದ್ದು ಅವರ ಕಾಲು ಮುರಿತವಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!