February 1, 2026

ಸೌದಿ ಅರೇಬಿಯಾದಲ್ಲಿ 2 ಪ್ರತ್ಯೇಕ ಅಪಘಾತ: ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 8 ಮಂದಿ ಮೃತ್ಯು

0
IMG-20221113-WA0013.jpg

ರಿಯಾದ್: ಸೌದಿ ಅರೇಬಿಯಾದಲ್ಲಿ 2 ಪ್ರತ್ಯೇಕ ಅಪಘಾತದಲ್ಲಿ ಕಾರು ಒಂಟೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 8 ಮಂದಿ ದಾರುಣವಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೊದಲ ಪ್ರಕರಣ ರಿಯಾದ್ ಪ್ರಾಂತ್ಯದ ಅಫ್ಲಾಜ್ ನಲ್ಲಿ ಸಂಭವಿಸಿದ್ದು ಅಪಘಾತದಲ್ಲಿ ಐದು ಯುವಕರು ಸಾವನ್ನಪ್ಪಿದ್ದು, ಅಲ್ ಅಹ್ಮರ್-ಲೈಲಾ ರಸ್ತೆಯ ಅಫ್ಲಾಜ್ನಿಂದ 30 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.

ಅಪಘಾತಕ್ಕೀಡಾದ ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರು ಬದುಕುಳಿಯಲಿಲ್ಲ.ಅಲ್-ಅಹ್ಮರ್ ಪುರಸಭೆಯು ರಸ್ತೆಯ ಹೆಚ್ಚಿನ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿದೆ.

ಆದಾಗ್ಯೂ, ಒಂಟೆ ಸಾಕಾಣಿಕೆ ಕೇಂದ್ರಗಳ ಬಳಿ ಹಾದುಹೋಗುವ ಅಲ್ ಅಹ್ಮರ್-ಲೈಲಾ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಅಲ್ ಅಹ್ಮರ್-ಲೈಲಾ ರಸ್ತೆಯ ಉಳಿದ ಭಾಗಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

ಮತ್ತೊಂದು ಪ್ರಕರಣ ಮದೀನಾ ರಸ್ತೆಯಲ್ಲಿ ಸಂಭವಿಸಿದೆ, ಹೆದ್ದಾರಿಯಲ್ಲಿದ್ದ ಒಂಟೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಕುಟುಂವೊಂದು ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾದ ಕಾರಣ ಕಾರಲ್ಲಿದ್ದ ಯೆಮೆನ್ ಮೂಲದ ಗರ್ಭಿಣಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಯೆಮೆನ್ ಮೂಲದ ಕುಟುಂಬವು ಬಿಶಾದಲ್ಲಿ ಮದುವೆಯಲ್ಲಿ ಭಾಗವಹಿಸಿದ ನಂತರ ಮದೀನಾಕ್ಕೆ ಪ್ರಯಾಣಿಸುತ್ತಿತ್ತು.

ಇದ್ದಕ್ಕಿದ್ದಂತೆ, ದಾರಿತಪ್ಪಿ ಒಂಟೆಗಳು ರಸ್ತೆಗಳನ್ನು ದಾಟುತ್ತಿರುವುದು ಕಂಡುಬಂದಿತು. ಆಗ ಒಂಟೆಗಳನ್ನು ತಪ್ಪಿಸಲು ನೋಡಿದಾಗ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಮತ್ತು ಗರ್ಭಿಣಿ ದಾರುಣವಾಗಿ ಅಂತ್ಯ ಕಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!