February 4, 2026

ಮಂಗಳೂರು: ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್‌‌ಗಳು ಬೆಂಕಿಗಾಹುತಿ

0
IMG-20221028-WA0021.jpg

ಮಂಗಳೂರು: ನಗರದ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬೆಂಗರೆಯಲ್ಲಿ ಹಲವು ಬೋಟ್ ಗಳು ಲಂಗರು ಹಾಕಿರುತ್ತವೆ. ಈ ಪೈಕಿ ಒಂದು ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಆ ಬೆಂಕಿ ಹತ್ತಿರಲ್ಲಿದ್ದ ಇತರ ಬೋಟ್ ಗಳಿಗೂ ಹಬ್ಬಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ.

ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!