ಕಟಪಾಡಿ: ಮನೆಗೆ ಸಿಡಿಲು ಬಡಿದು 2 ಲಕ್ಷ ರೂ.ಗೂ ಅಧಿಕ ನಷ್ಟ, ಮಹಿಳೆಗೆ ಗಾಯ
ಕಟಪಾಡಿ: ಮೂಡಬೆಟ್ಟು ಗ್ರಾಮದ ಶಂಕರಪುರ ಬಳಿಯ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯೊಡತಿ ಮೂರ್ಛೆ ತಪ್ಪಿದ್ದು, ಸುಮಾರು 2 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದ ಘಟನೆಯು ಶನಿವಾರ ರಾತ್ರಿ ನಡೆದಿದೆ
ಶನಿವಾರ ರಾತ್ರಿಯ ವೇಳೆಯಲ್ಲಿ ಏಕಾಏಕಿಯಾಗಿ ಸುರಿದ ಭಾರೀ ಮಳೆ, ಗುಡುಗು, ಸಿಡಿಲು ಮಿಂಚು ಮೇಳೈಸಿದ್ದು, ಪ್ರಾರ್ಥನೆ ಪೂರೈಸಿ ಮನೆಯೊಳಗೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ಈ ಘಟನೆಯು ನಡೆದಿದೆ ಎಂದು ಮನೆಯೊಡತಿ ಲೀನಾ ಡಿಸೋಜ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಬಡಿದ ಸಿಡಿಲು ವಾಸ್ತವ್ಯವಿದ್ದ ಥಾರಸಿ ಮನೆಯ ವಿದ್ಯುತ್ ಸಂಪರ್ಕವನ್ನು ಹಾನಿಗೊಳಿಸಿದೆ. ತಮ್ಮದೇ, ಪಕ್ಕದ ಹಂಚಿನ ಮನೆಯ ವಿದ್ಯುತ್ ಸಂಪರ್ಕವೂ ಸುಟ್ಟು ಕರಕಲಾಗಿದೆ.




