February 3, 2026

ಬೆಂಗಳೂರು ಮೂಲದ ವ್ಯಕ್ತಿಯ ಮೃತದೇಹ ಪುತ್ತೂರಿನ ಲಾಡ್ಜ್ ನಲ್ಲಿ ಪತ್ತೆ

0
image_editor_output_image2128837368-1666157571789

ಪುತ್ತೂರು: ಬೆಂಗಳೂರು‌ ಮೂಲದ ವ್ಯಕ್ತಿಯೊಬ್ಬರ ಮೃತ ದೇಹ ಪುತ್ತೂರಿನ ದರ್ಬೆಯಲ್ಲಿರುವ ಲಾಡ್ಜ್ ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅ.18 ರ ತಡ ರಾತ್ರಿ ಪತ್ತೆಯಾಗಿದೆ.

ಬೆಂಗಳೂರು ಮೂಲದ ಸುಮಾರು 51 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟವರಾಗಿದ್ದು, ಅವರು ಅ.16 ಕ್ಕೆ ಪುತ್ತೂರಿಗೆ ಬಂದು ಲಾಡ್ಜ್ ನಲ್ಲಿ ರೂಮ್ ಮಾಡಿದ್ದರು. ಅ.18 ರ ತಡ ರಾತ್ರಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆ ಯ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತರ ಗುರುತು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!