March 23, 2026

ಕಾಸರಗೋಡು : ಬಿ ಎಸ್ ಎನ್ ಎಲ್ ನ ಕೇಬಲ್ ಕಳವು – ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದ ಐವರು ಖದೀಮರು

0
IMG-20221017-WA0057

ಕಾಸರಗೋಡು:   ಬಿ ಎಸ್ ಎನ್ ಎಲ್ ನ ಕೇಬಲ್ ಕಳವುಗೈದ  ಐವರು  ಅಸ್ಸಾಂ  ನಿವಾಸಿಗಳನ್ನು ಚಿಮೇನಿ  ಪೊಲೀಸರು ಬಂಧಿಸಿದ್ದಾರೆ. ಇವರು ಕಳವು ಗೈದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕೇಬಲ್ ನ್ನು   ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ರಸೂಲ್ ಹಸನ್, ಮಜಿದುಲ್ ಇಸ್ಲಾಂ,   ಪೂಲ್ ಬಾರ್ ಅಲಿ, ಶರೀಫುಲ್, ಮುಹಮ್ಮದ್  ರೂಬಿ ಉಲ್ ಇಸ್ಲಾಂ ಬಂಧಿತರು.

ವಾಹನ ತಪಾಸಣೆ ನಡೆಸುತ್ತಿ ದ್ದಾಗ ಪೊಲೀಸರನ್ನು ಕಂಡು   ವಾಹನ ನಿಲ್ಲಿಸ ದೆ ಪರಾರಿ ಯಾಗಿದ್ದು, ಸಂಶಯ ಗೊಂಡು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ತಪಾಸಣೆ ನಡೆಸಿದಾಗ ಕೇಬಲ್ ಪತ್ತೆಯಾಗಿದೆ. ಕಚ್ಚಾ ಸಾಮಗ್ರಿ ಹೆಕ್ಕುವ ನೆಪದಲ್ಲಿ ಬಂದಿದ್ದ ಇವರು ಕೇಬಲ್ ನ್ನು ಕಳವು  ಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!