March 23, 2026

ಮಳಲಿ ಮಸೀದಿ ಪ್ರಕರಣ: ನ.9ಕ್ಕೆ ವಿಚಾರಣೆ ಸಂಬಂಧದ ತೀರ್ಪು

0
image_editor_output_image-39668832-1665995785849.jpg

ಮಂಗಳೂರು : ಮಳಲಿ ಮಸೀದಿ ಕಟ್ಟಡ ಪ್ರಕರಣದ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಸಂಬಂಧದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ನ.9ಕ್ಕೆ ಮುಂದೂಡಿದೆ.

ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‌ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆೆ ವಾದ ವಿವಾದ ನಡೆದಿತ್ತು. ಈ ಕುರಿತಾದ ಆದೇಶವನ್ನು ನ್ಯಾಯಾಲಯ ಅ.17ಕ್ಕೆೆ ನಿಗದಿಗೊಳಿಸಿತ್ತು. ಇದೀಗ ಆದೇಶವನ್ನು ಮತ್ತೊಮ್ಮೆ ಮುಂದೂಡಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 27ರಂದು ಮಂಗಳೂರು ಕೋರ್ಟ್ ತೀರ್ಪನ್ನು ಮುಂದೂಡಿತ್ತು. ಇದೀಗ ಮತ್ತೆ ಮಂಗಳೂರು ಕೋರ್ಟ್‌ ತೀರ್ಪನ್ನು ಮುಂದೂಡಿದೆ.

Leave a Reply

Your email address will not be published. Required fields are marked *

error: Content is protected !!