September 27, 2026

ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ಶಾಲೆಗೆ ದಸರಾ ರಜೆ – ಮಂಗಳೂರು ತಾಲೂಕಿಗೆ ನಾಲ್ಕು ದಿನ ಹೆಚ್ಚುವರಿ ರಜೆ ಘೋಷಣೆ

0
image_editor_output_image212611699-1663950539171

ಮಂಗಳೂರು:  ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16ರವರೆಗೆ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ದಸರಾ ಸೆಪ್ಟೆಂಬರ್ 26 ರಿಂದ ಆರಂಬಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದೆ. ಇನ್ನು ಈ ರಜೆ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ ಮತ್ತು ಇದು ಕೇವಲ‌ ಮಂಗಳೂರು ತಾಲೂಕಿಗೆ ಅನ್ವಯವಾಗುತ್ತದೆ.

ರಾಜ್ಯದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ನೀಡಲಾಗಿದೆ.  ಆದರೆ ಮಂಗಳೂರು ದಸರಾ ಆರಂಭಗೊಳ್ಳುವ ಸಂದರ್ಭದಲ್ಲೇ ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಆಗ್ರಹಗಳು ಕೇಳಿಬಂದಿತ್ತು.

 

ಇದೀಗ ತಾಲೂಕಿನಲ್ಲಿ ಹೆಚ್ಚುವರಿ ನಾಲ್ಕು ದಿನ ರಜೆ ಘೋಷಿಸಲು ಶಿಕ್ಷಣ ಸಚಿವರು ಸೂಚಿಸಿದ ಹಿನ್ನೆಲೆ ಮಂಗಳೂರು ತಾಲೂಕಿನಲ್ಲಿ ಮಾತ್ರ  ಸೆ. ೨೮ ರಿಂದ ಅಕ್ಟೋಬರ್ ೧ರ ತನಕ ಹೆಚ್ಚುವರಿ ರಜೆ ನೀಡಲಾಗಿದ್ದು, ಆ ಮೂಲಕ ಅಕ್ಟೋಬರ್ ೧೬ರವರೆಗೆ ದಸರಾ ರಜೆ ನೀಡಿದಂತಾಗಿದೆ.

ಅಕ್ಟೋಬರ್ ೨ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಹಾಗೂ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನೀಡಿರುವ ೪ ದಿನಗಳ ರಜೆಯನ್ನು ನವೆಂಬರ್ ೨೦೨೨ ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!